Media
Grand Kannada Rajyotsava Celebrations by Faculty, Staff and Students of Alliance University
12 December, 2022
The 67th Kannada Rajyotsava was celebrated with grandeur at Alliance University with the coordination of Kannada Bhasha Kendra, Department of Language and Literature, Alliance Ascent College, and Department of Student Support Services.
Various events such as essay competition, speech competition, singing competition, mono acting competitions were conducted for the students and staff of the University to celebrate the Kannada Rajyotsava across the central and city campuses of the varsity.
At the central campus, poet, lyricist, orator and professor of management Prof. Satyesh Bellur arrived as the chief guest for the celebrations and spoke in the context of ancient Kannada literature that it has been progressing towards prosperity, starting from the mature ideas of poets like Pampa, Ponna, and Ranna. In the context of medieval Kannada literature, he mentioned that Vachanakara’s like Jedara Dasimaiah, Akkamahadevi, Basavanna conveyed idealistic and social concerns to the society through verses in simple language understandable by common people. He said that in the modern era, the ideas of poets like Kuvempu, Bendre, DVG are full of social concern. He said that it is the responsibility of the people of the state to realize the identity of Kannada and to preserve and develop it.
Indologist, researcher and personality development trainer Dr. Aarthi VB delivered a lecture through virtual mode and stated that the people of the state need to develop Kannada language with great respect for the heritage of Karnataka. Karnataka is also mentioned in Mahabharata and Kannada literature has a history of two thousand years and contains many idealistic views. She stated that many people are forgetting many precious words of Kannada due to the influence of English language in the modern context and expressed the idea that Kannada should be always the favorite language of the state.
On the occasion, a novel and a book were also released by the dignitaries. One was a Kannada detective novel titled “Dvaita” authored by Alliance University staff member, Mr. Ragavendra Raju K.M and another, a book titled “Beginner’s Forensic Science” by Dr. Chitrakara Hegde, Associate Professor in the Department of Science and Dr. Shekhar R, Deputy Head of Department of Computer Science & Engineering at the College of Engineering and Design of Alliance University.
Similarly, Alliance Ascent College, the constituent college of Alliance University also celebrated the spirit of Kannada Rajyotsava with grandeur at Kuvempu Park in BTM Layout. The Chief Guest for the Kannada Rajyotsava celebrations of Alliance Ascent College was Ms. Sowmya Reddy, Member of the Karnataka Legislative Assembly. In her address to the audience, she stressed on the qualities of retaining one’s individuality during tough times. She also narrated some of her personal experiences of her student life which served as an inspiration for the students.
The events were attended by Pro-Chancellor, Mr. Abhay G. Chebbi; Vice-Chancellor, Dr. Anubha Singh, Vice-Chancellor; Pro Vice-Chancellors, Mr. Prakash Budur and Dr. Punith Cariappa, along with many other members of the University.
Mr. Abhay Chebbi, Pro-Chancellor, Alliance University in his addresses at these events emphasized on taking pride in the cultural traditions of Karnataka. He said that Karnataka has diverse cultural elements and that the regional dialects spoken in different parts of Karnataka have their own charm and uniqueness and mentioned that the richness of Kannada language has the power to attract everyone and should be encouraged.
The audiences who had gathered in large numbers to watch the events had a mesmerizing evening. Members at the Central Campus were amazed by the “Sammilana” dance performance by “Shambhavi” dance troupe led by the famous Kuchipudi dancer Ms. Prateeksha. The event in the city by Alliance Ascent College concluded on a high note with a “Yakshagana” performance by the professional troupe, “Shwethachakra”, which was highly applauded by the audience.
Both the events were splendid ones that instilled pride in all the participants about Kannada and the rich heritage of Karnataka and the confidence that the traditions of the state would thrive and flourish.
#allianceuniversity #bengaluru #kannadarajyotsava2022 #kannada #celebrations #bangalore
ಅಲಯನ್ಸ್ ವಿಶ್ವವಿದ್ಯಾಲಯದ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ವೈಭವದ ಕನ್ನಡ ರಾಜ್ಯೋತ್ಸವ ಆಚರಣೆ
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾ ಕೇಂದ್ರ, ಭಾಷೆ ಮತ್ತು ಸಾಹಿತ್ಯ ವಿಭಾಗ, ಅಲಯನ್ಸ್ ಅಸೆಂಟ್ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ಬೆಂಬಲ ಸೇವಾ ವಿಭಾಗಗಳ ಸಹಯೋಗದೊಂದಿಗೆ ೬೭ ನೇ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಅಲಯನ್ಸ್ ವಿಶ್ವವಿದ್ಯಾನಿಲಯದ ಕೇಂದ್ರ ಆವರಣ ಮತ್ತು ನಗರದಲ್ಲಿರುವ ಅಲಯನ್ಸ್ ಅಸೆಂಟ್ ಮಹಾವಿದ್ಯಾಲಯದ ಆವರಣಗಳಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಅಂಗವಾಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಗಾಗಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಗಾಯನ ಸ್ಪರ್ಧೆ, ಏಕ ಪಾತ್ರ ಅಭಿನಯ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. .
ಅಲಯನ್ಸ್ ವಿಶ್ವವಿದ್ಯಾಲಯದ ಕೆಂದ್ರ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮುಖ್ಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿಗಳು, ಗೀತರಚನೆಕಾರರು, ವಾಗ್ಮಿಗಳು ಹಾಗೂ ನಿರ್ವಹಣಾ ಶಾಸ್ತ್ರದ ಪ್ರಾಧ್ಯಾಪಕರೂ ಆದ ಪ್ರೊ. ಸತ್ಯೇಶ ಬೆಳ್ಳೂರು ಅವರು ಮಾತನಾಡಿ ಪ್ರಾಚೀನ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಪಂಪ, ಪೊನ್ನ, ರನ್ನರಂತಹ ಕವಿಗಳಂತಹ ಪ್ರೌಢ ವಿಚಾರಗಳಿಂದ ಆರಂಭವಾಗಿ ಕನ್ನಡ ಸಾಹಿತ್ಯವು ಇಂದಿನವರೆಗೂ ಸಮೃದ್ಧಿಯತ್ತ ಸಾಗುತ್ತ ಬಂದಿದೆ ಎಂದು ಅಭಿಪ್ರಾಯಪಟ್ಟರು. ಮಧ್ಯಕಾಲೀನ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಜೇಡರ ದಾಸಿಮಯ್ಯ, ಅಕ್ಕಮಹಾದೇವಿ, ಬಸವಣ್ಣ ಮೊದಲಾದ ವಚನಕಾರರು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ವಚನಗಳ ಮೂಲಕ ಪ್ರಾಜ್ಞರಿಗೂ ಆದರ್ಶಪ್ರಾಯವಾದ ಹಾಗೂ ಸಾಮಾಜಿಕ ಕಳಕಳಿಯುಳ್ಳ ವಿಚಾರಗಳನ್ನು ಕಟ್ಟಿಕೊಟ್ಟಿದ್ದು, ಅಂತಹ ಸಾಹಿತ್ಯ ಕನ್ನಡದ ನೆಲದಲ್ಲಿ ರಚನೆಯಾಗಿದ್ದು, ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು. ಆಧುನಿಕ ಕಾಲಘಟ್ಟದಲ್ಲಿ ಕುವೆಂಪು, ಬೇಂದ್ರೆ, ಡಿವಿ.ಜಿಯವರಂತಹ ಕವಿಗಳ ವಿಚಾರಧಾರೆಗಳು ಸಾಮಾಜಿಕ ಕಾಳಜಿಯಿಂದ ಕೂಡಿವೆ ಎಂದು ನುಡಿದರು. ಕನ್ನಡದ ಅಸ್ಮಿತೆಯನ್ನು ಅರಿತು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಂಸ್ಕೃತಿ ಚಿಂತಕರು, ಸಂಶೋಧಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಆರತಿ ವಿ.ಬಿ ಅವರು ಉಪನ್ಯಾಸವನ್ನು ನೀಡಿ, ಕರ್ನಾಟಕ ಹಾಗೂ ಕನ್ನಡ ನಾಡಿನ ಭವ್ಯ ಪರಂಪರೆಯ ಕುರಿತು ನಾವೆಲ್ಲರೂ ಅಭಿಮಾನವನ್ನು ಹೊಂದಿ ನಾಡು, ನುಡಿಯನ್ನು ಬೆಳೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮಹಾಭಾರತದಲ್ಲೂ ಕೂಡ ಕರ್ನಾಟಕದ ಪ್ರಸ್ತಾಪವಿದೆ. ಕನ್ನಡ ಸಾಹಿತ್ಯವು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅನೇಕ ಮೌಲಿಕ ವಿಚಾರಗಳಿಂದ ಕೂಡಿದೆ. ಆಧುನಿಕ ಸಂದರ್ಭದಲ್ಲಿ ಆಂಗ್ಲಭಾಷೆಯ ಪ್ರಭಾವದಿಂದಾಗಿ ಕನ್ನಡದ ಅನೇಕ ಅಮೂಲ್ಯ ಪದಗಳನ್ನು ನಾವು ಮರೆಯುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟ ಅವರು ಕನ್ನಡ ನಮ್ಮ ಅಭಿಮಾನದ ಭಾಷೆಯಾಗಬೇಕು, ಕನ್ನಡದ ಬಳಕೆಗೆ ಯಾವುದೇ ಹಿಂಜರಿಕೆ ಇರಬಾರದು ಎಂಬ ವಿಚಾರವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗಣ್ಯರಿಂದ ಕನ್ನಡ ಕಾದಂಬರಿ ಹಾಗೂ ಇನ್ನೊಂದು ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ರಾಘವೇಂದ್ರರಾಜು ಕೆ. ಎಂ ಅವರ “ದ್ವೈತ” ಪತ್ತೇದಾರಿ ಕಾದಂಬರಿ ಹಾಗೂ ಅಲಯನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಚಿತ್ರಾಕರ ಹೆಗಡೆ ಹಾಗೂ ಇಂಜಿನಿಯರಿಂಗ್ ಹಾಗೂ ವಿನ್ಯಾಸ ನಿಕಾಯದ ಗಣಕ ವಿಜ್ಞಾನ ವಿಭಾಗದ ಉಪ ಮುಖ್ಯಸ್ಥರಾದ ಡಾ. ಶೇಖರ್ ಆರ್ ಅವರು ರಚಿಸಿದ “ಬಿಗಿನ್ನರ್ಸ್ ಫೋರೆನ್ಸಿಕ ಸೈನ್ಸ್” ಎಂಬ ಕೃತಿಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.
ಅದೇ ರೀತಿ ಅಲಯನ್ಸ್ ವಿಶ್ವವಿದ್ಯಾನಿಲಯದ ಘಟಕ ಮಹಾವಿದ್ಯಾಲಯ ಅಲಯನ್ಸ್ ಅಸೆಂಟ್ ಮಹಾವಿದ್ಯಾಲಯ ಕೂಡ ಬಿಟಿಎಂ ಲೇಔಟ್‌ನಲ್ಲಿರುವ ಕುವೆಂಪು ಪಾರ್ಕ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿತು. ಅಲಯನ್ಸ್ ಅಸೆಂಟ್ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಗೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಸದಸ್ಯರಾದ ಶ್ರೀಮತಿ ಸೌಮ್ಯ ರೆಡ್ಡಿ ಅವರು ಆಗಮಿಸಿದ್ದರು. ಸಭಿಕರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ, ಜೀವನದ ಕಠಿಣ ಸಮಯದಲ್ಲಿ ವ್ಯಕ್ತಿತ್ವದ ಅನನ್ಯತೆಯನ್ನು ಉಳಿಸಿಕೊಳ್ಳುವ ಗುಣಗಳನ್ನು ಹೊಂದಿರಬೇಕಾದ ಅಗತ್ಯತೆಯನ್ನು ಒತ್ತಿಹೇಳಿದರು. ತಮ್ಮ ವಿದ್ಯಾರ್ಥಿ ಜೀವನದ ಕೆಲವು ವೈಯಕ್ತಿಕ ಅನುಭವಗಳನ್ನು ವಿವರಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮಗಳಲ್ಲಿ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಶ್ರೀ ಅಭಯ್ ಜಿ. ಚೆಬ್ಬಿ ಅವರು ಉಪಸ್ಥಿತರಿದ್ದರು. ಕುಲಪತಿಗಳಾದ , ಡಾ. ಅನುಭಾ ಸಿಂಗ್, ಸಮ ಕುಲಪತಿಗಳಾದ ಶ್ರೀ ಪ್ರಕಾಶ್ ಬುದೂರ್ ಮತ್ತು ಡಾ. ಪುನೀತ ಕಾರಿಯಪ್ಪ, ಕುಲಸಚಿವರಾದ ಡಾ. ನಿವೇದಿತಾ ಮಿಶ್ರಾ ಹಾಗೂ ವಿಶ್ವವಿದ್ಯಾಲಯದ ಇತರ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಅಲಯನ್ಸ್ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿಗಳಾದ ಶ್ರೀ ಅಭಯ ಜಿ ಚೆಬ್ಬಿ ಅವರು ಮಾತನಾಡಿ ಕನ್ನಡ ನಾಡು ಹೆಮ್ಮೆ ಪಡುವಂತಹ ವೈವಿಧ್ಯಮಯ ಸಾಂಸ್ಕೃತಿಕ ಅಂಶಗಳನ್ನು ಹೊಂದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮಾತನಾಡಲ್ಪಡುವ ಪ್ರಾದೇಶಿಕ ಉಪಭಾಷೆಗಳು ತಮ್ಮದೇ ಆದ ಸೊಗಡು ಹಾಗೂ ವಿಶಿಷ್ಟತೆಯನ್ನು ಹೊಂದಿದ್ದು, ಕನ್ನಡ ಭಾಷೆಯ ಸಮೃದ್ಧಿಯು ಎಲ್ಲರನ್ನೂ ಸೆಳೆಯುವ ಶಕ್ತಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಅದನ್ನುಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಸಭಿಕರು ಸಂಜೆಯ ಸಂಭ್ರಮವನ್ನು ಕಣ್ತುಂಬಿಕೊಂಡರು. ಖ್ಯಾತ ಕೂಚಿಪುಡಿ ನರ್ತಕಿ ಶ್ರೀಮತಿ ಪ್ರತೀಕ್ಷಾ ಕಾಶಿ ಅವರ ನೇತೃತ್ವದ “ಶಾಂಭವಿ” ನೃತ್ಯ ತಂಡವು ಪ್ರದರ್ಶಿಸಿದ ಅಪೂರ್ವವಾದ “ಸಮ್ಮಿಲನ” ನೃತ್ಯ ಪ್ರದರ್ಶನವನ್ನು ಕಂಡು ಮೂಕವಿಸ್ಮಿತರಾದರು. . ಅಲಯನ್ಸ್ ಅಸೆಂಟ್ ಮಹಾವಿದ್ಯಾಲಯದ ವತಿಯಿಂದ ನಗರದಲ್ಲಿ ನಡೆದ ಕಾರ್ಯಕ್ರಮವು “ಶ್ವೇತಚಕ್ರ ವೃತ್ತಿಪರ ಯಕ್ಷಗಾನ ತಂಡದ ಕಲಾ ಪ್ರದರ್ಶನದೊಂದಿಗೆ ಅದ್ದೂರಿಯಾಗಿ ಮುಕ್ತಾಯಗೊಂಡಿತು, ಇದು ಪ್ರೇಕ್ಷಕರಿಂದ ಹೆಚ್ಚು ಶ್ಲಾಘಿಸಲ್ಪಟ್ಟಿತು.
ಈ ಎರಡೂ ಕಾರ್ಯಕ್ರಮಗಳು ಕನ್ನಡ ಭಾಷೆ ಮತ್ತು ಕರ್ನಾಟಕದ ಶ್ರೀಮಂತ ಪರಂಪರೆಯ ಬಗ್ಗೆ ಸಭಿಕರಲ್ಲಿ ಹೆಮ್ಮೆಯನ್ನು ಮೂಡಿಸಿದವು ಹಾಗೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳು ಮುಂಬರುವ ದಿನಗಳಲ್ಲಿ ಹೊಸ ಎತ್ತರಕ್ಕೆ ಸಾಗಲಿವೆ ಎಂಬ ವಿಶ್ವಾಸವನ್ನು ಮೂಡಿಸಿದವು.