Media
Two days National Seminar on Vocational and Skill Education through the Medium of Indian Languages: Challenges and Opportunities' - Successful
30 June, 2023
Department of Language and Literature, Alliance School of Liberal Arts in collaboration with Central Institute of Indian Languages organised a two-day National Seminar on the theme 'Vocational and Skill Education through the Medium of Indian Languages: Challenges and Opportunities' on 29th and 30th June at the Central Campus of Alliance University, Bengaluru.
Renowned Scholars of Hindi Prof. Shishir Pandey, Prof. Sadanand Bhosale, Dr. Pradeep Tripathi - Prof. S V S Narayana Raju, Dr.C. Jayashankar Babu, Dr. Vivekanand Tiwari and Kannada Scholars Dr. T.D. Rajanna, Dr. M. S. Durga Praveen, Dr. T. H. Lavakumar, Telugu Scholar Prof. N. A.D. Pal and Tamil Scholar Dr.L.Ramamoorthy, Malayalam thinker Prof. Ajeesh Thomas and academicians, literature lovers, researchers and students from various parts of the country participated in the seminar.
Researchers from different parts of the country presented their ideas in Indian languages including Kannada, Hindi, Tamil, Telugu, Malayalam.
In the inaugural session of the seminar, the dignitaries released the Seminar Special Issue of the Peer Reviewed Quarterly magazine published by the Department of Language and Literature, Alliance University.
Pro -Chancellor Mr. Abhay G Chebbi, Vice Chancellor Dr. Anubha Singh,
Dr. Aditya Gupta Chief Operating Officer IIM Bangalore, Dr Shishir Kumar Pandey, Vice-Chancellor, J.R.D University Uttar Pradesh, Dr. Pankaj Dwivedi LJRO Central Institute of Indian Languages, Dr. Pankaj addressed on the occasion. Dr.Anirudh Sridhar Associate Dean, Alliance School of Liberal Arts welcomed the guests.
Many ideas of importance on the topic were discussed in the Parellal Sessions held on “Challenges and Opportunities of Vocational and Skill Education through The Medium of Indian Languages, “Role of Media, Cinema and Literature in the Development of Vocational and Skill Education”, “Role of Indian Languages in Vocational Education and Importance of Technology, “Anonymous folk tales of different states of India and useful information contained in them: in the context of vocational and skill education.
At the Valedictory Session held on June 30, 2023, Dr. Priestley Shan Pro- Vice-Chancellor, Alliance University, Dr. Nivedita Mishra Registrar, Mr. Ratan Kumar Vice President, Business Management HSBC Bangalore, expressed their views on the theme of Seminar. Dr. Pankaj Dwivedi LJRO, Central Institute of Indian Languages, Mysuru commented on the sessions of two-day National Seminar.
Dr. Liju Kuriakose, Assistant Dean, addressed the gathering as a closing Note. Dr. Anupama Tiwari presented the Report of Two-Day National Seminar. Dr. Vivekanand Sajjan Thanked the gathering. By opening gate way to many fields through the dicussion of diverse Research topics the Seminar successfully concluded.
'ಭಾರತೀಯ ಭಾಷಾ ಮಾಧ್ಯಮದ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಶಿಕ್ಷಣ: ಸವಾಲುಗಳು ಮತ್ತು ಅವಕಾಶಗಳು ' – ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಯಶಸ್ವಿ.
ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಉದಾರ ಕಲೆಗಳ ನಿಕಾಯದ ಭಾಷೆ ಮತ್ತು ಸಾಹಿತ್ಯ ವಿಭಾಗ ಹಾಗೂ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸಂಯುಕ್ತಾಶ್ರಯದಲ್ಲಿ ಜೂನ್ ೨೯ ಹಾಗೂ ೩೦ರಂದು 'ಭಾರತೀಯ ಭಾಷಾ ಮಾಧ್ಯಮದ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಶಿಕ್ಷಣ: ಸವಾಲುಗಳು ಮತ್ತು ಅವಕಾಶಗಳು' ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಹಿಂದಿ ವಿದ್ವಾಂಸರಾಗಿ ಪ್ರೊ. ಶಿಶಿರ ಪಾಂಡೆಯ ಪ್ರೊ. ಸದಾನಂದ ಭೋಸಲೆ, ಡಾ. ಪ್ರದೀಪ ತ್ರಿಪಾಠಿ- ಪ್ರೊ. ಎಸ್ ವಿ ಎಸ್ ನಾರಾಯಣ ರಾಜು – ಡಾ. ಸಿ. ಜಯಶಂಕರ ಬಾಬು – ಡಾ. ವಿವೇಕಾನಂದ ತಿವಾರಿ ಹಾಗೂ ಕನ್ನಡ ವಿದ್ವಾಂಸರಾಗಿ ಡಾ. ಟಿ.ಡಿ ರಾಜಣ್ಣ, ಡಾ. ಎಂ. ಎಸ್ ದುರ್ಗಾ ಪ್ರವೀಣ, ಡಾ. ಟಿ. ಎಚ್ ಲವಕುಮಾರ, ತೆಲುಗು ವಿದ್ವಾಂಸರಾಗಿ ಪ್ರೊ. ಎನ್. ಎ ಡಿ ಪಾಲ್ ಹಾಗೂ ತಮಿಳು ವಿದ್ವಾಂಸರಾಗಿ ಡಾ.ಎಲ್. ರಾಮಮೂರ್ತಿ, ಮಲಯಾಳಂ ಚಿಂತಕರಾಗಿ ಪ್ರೊ. ಅಜೀಶ ಥಾಮಸ್ ಅವರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಶಿಕ್ಷಣ ತಜ್ಞರು, ಸಾಹಿತ್ಯ ಪ್ರೇಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡರು. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಸೇರಿದಂತೆ ಭಾರತೀಯ ಭಾಷೆಗಳಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಂಶೋಧಕರು ತಮ್ಮ ವಿಚಾರಗಳನ್ನು ಮಂಡಿಸಿದರು.
ವಿಚಾರ ಸಂಕಿರಣದ ಉದ್ಘಾಟನಾ ಗೋಷ್ಠಿಯಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಭಾಷೆ ಹಾಗೂ ಸಾಹಿತ್ಯ ವಿಭಾಗದಿಂದ ಪ್ರಕಟವಾಗುವ ತಜ್ಞ ಪರಿಶೀಲಿತ ತ್ರೈಮಾಸಿಕ ಪತ್ರಿಕೆಯ ವಿಚಾರ ಸಂಕಿರಣ ವಿಶೇಷಾಂಕ ಸಂಚಿಕೆಯನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿಗಳಾದ ಶ್ರೀ ಅಭಯ ಜಿ. ಚೆಬ್ಬಿ, ಕುಲಪತಿಗಳಾದ ಡಾ. ಅನುಭಾ ಸಿಂಗ್, ಐಐಎಮ್ ಬೆಂಗಳೂರಿನ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳಾದ ಡಾ. ಆದಿತ್ಯ ಗುಪ್ತಾ, ಉತ್ತರ ಪ್ರದೇಶದ ಜೆ.ಆರ್. ಡಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಶಿಶಿರ ಕುಮಾರ ಪಾಂಡೆಯ, ಭಾರತೀಯ ಭಾಷಾ ಸಂಸ್ಥಾನದ ಅಧಿಕಾರಿಗಳಾದ ಡಾ. ಪಂಕಜ ದ್ವಿವೇದಿಯವರು ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು. ಅಲಯನ್ಸ್ ಉದಾರ ಕಲೆಗಳ ನಿಕಾಯದ ಸಹ ಡೀನರಾದ ಡಾ. ಅನಿರುದ್ಧ ಶ್ರೀಧರ ಅವರು ಸ್ವಾಗತ ನುಡಿಗಳನ್ನಾಡಿದರು.
ಎರಡು ದಿನಗಳ ಕಾಲ “ಭಾರತೀಯ ಭಾಷಾ ಮಾಧ್ಯಮದ ಮೂಲಕ ವೃತ್ತಿಪರ ಮತ್ತು ಕೌಶಲ್ಯಾಧಾರಿತ ಶಿಕ್ಷಣ ಸವಾಲುಗಳು ಮತ್ತು ಅವಕಾಶಗಳು”, “ವೃತ್ತಿಪರ ಹಾಗೂ ಕೌಶಲ್ಯಾಧಾರಿತ ಶಿಕ್ಷಣದ ವಿಕಾಸದಲ್ಲಿ ಮಾಧ್ಯಮ, ಸಿನೆಮಾ ಮತ್ತು ಸಾಹಿತ್ಯದ ಪಾತ್ರ”, “ವೃತ್ತಿ ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಪಾತ್ರ ಹಾಗೂ ತಂತ್ರಜ್ಞಾನದ ಮಹತ್ವ” “ಭಾರತದ ವಿವಿಧ ರಾಜ್ಯಗಳ ಅನಾಮಧೇಯ ಜಾನಪದ ಕಥೆಗಳು ಹಾಗೂ ಅವುಗಳಲ್ಲಿರುವ ಉಪಯುಕ್ತ ಮಾಹಿತಿ- ವೃತ್ತಿಪರ ಹಾಗೂ ಕೌಶಲ್ಯಾಧಾರಿತ ಶಿಕ್ಷಣದ ಸಂದರ್ಭದಲ್ಲಿ” ಎಂಬ ವಿಷಯಗಳ ಕುರಿತು ಸಮಾನಾಂತರ ಗೋಷ್ಠಿಗಳಲ್ಲಿ ಅತ್ಯಂತ ಮಹತ್ವಪೂರ್ಣ ವಿಚಾರಗಳು ಚರ್ಚೆಯಾದವು.
೩೦ ಜೂನ್,೨೦೨೩ರಂದು ನಡೆದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಸಮ ಕುಲಪತಿಗಳಾದ ಡಾ. ಪ್ರಿಸ್ಟ್ಲೀ ಶಾನ್, ಕುಲಸಚಿವರಾದ ಡಾ. ನಿವೇದಿತಾ ಮಿಶ್ರಾ, ಎಚ್ ಎಸ್ ಬಿ ಸಿ ಬೆಂಗಳೂರಿನ ವ್ಯವಹಾರ ನಿರ್ವಹಣೆ ವಿಭಾಗದ ಉಪಾಧ್ಯಕ್ಷರಾದ ಶ್ರೀ ರತನ್ ಕುಮಾರ ಅವರು ವಿಚಾರ ಸಂಕಿರಣದ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಅಧಿಕಾರಿಗಳಾದ ಡಾ. ಪಂಕಜ ದ್ವಿವೇದಿ ಅವರು ಎರಡು ದಿನಗಳ ವಿಚಾರ ಸಂಕಿರಣದ ಕುರಿತು ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.
ಅಲಯನ್ಸ್ ಉದಾರ ಕಲೆಗಳ ನಿಕಾಯದ ಸಹಾಯಕ ಡೀನರಾದ ಡಾ. ಲಿಜು ಕುರಿಯಾಕೋಸ್ ಅವರು ಸಮಾರೋಪ ನುಡಿಗಳನ್ನಾಡಿದರು. ಡಾ. ಅನುಪಮಾ ತಿವಾರಿಯವರು ವಿಚಾರ ಸಂಕಿರಣದ ವರದಿಯನ್ನು ಮಂಡಿಸಿದರು. ಡಾ. ವಿವೇಕಾನಂದ ಸಜ್ಜನ ವಂದಿಸಿದರು. ವೈವಿಧ್ಯಮಯ ಸಂಶೋಧನಾ ವಿಷಯಗಳ ಚರ್ಚೆಯ ಮೂಲಕ ವಿಚಾರ ಸಂಕಿರಣವು ಅನೇಕ ವಿಷಯಗಳಿಗೆ ದಿಕ್ಸೂಚಿಯನ್ನು ನೀಡುವುದರ ಮೂಲಕ ಯಶಸ್ವಿಯಾಗಿ ಸಮಾರೋಪಗೊಂಡಿತು.