Media
Alliance University celebrated the 69th Kannada Rajyotsava with grandeur. It was organised in collaboration with the Kannada Bhasha Kendra, Department of Language and Literature, Kannada Sangha, and Department of Student Support Services.
Competitions and Activities
From October 29 to November 6, 2024, various competitions, including Extempore, Elocution, Essay, Dance, Singing, Rangoli, and Traditional Attire competitions, were organised to encourage the hidden talents of the university's students and staff.
Flag Hoisting Ceremony
On November 5, at 9:00 AM, the flag hoisting ceremony took place at the basketball court. Vice Chancellor of the University, Dr Priestly B. Shan, hoisted the flag and paid floral tributes to Goddess Bhuvaneshwari. The Kannada Naadageethe (state anthem) was presented on this occasion.
The Grand Celebration of Kannada Rajyotsava was held on November 8, 2024. Dr B.T. Lalitanaik, a Renowned writer, Karnataka Sahitya Academy Awardee and former Minister, Dept. of Kannada and Culture, Govt. of Karnataka, graced the occasion as a Chief Guest.
Chief Guest's Address
In her speech, she emphasised the importance of effectively expressing our emotions in our mother tongue and stressed the need for continuous efforts to achieve gender equality, even in today's modern society. She spoke about the need to uphold humanity throughout life and preserve and nurture the diversity of our land. She highlighted that Karnataka is known for its rich heritage of art and opined that each art form represents our life.
Registrar's Address
The university's Registrar, Dr Viswanathaiah Matam, spoke about Karnataka's glorious legacy, noting Kannada's pride in being associated with eight Jnanpitha awards, from Kuvempu to Kambar.
The event featured a spectacular Yakshagana performance by the Udupi-based Yakshashree Kala Vrinda, led by Srinidhi Holla, and a Vibrant Dollu Kunitha performance by Dollu Chandru and his troupe, showcasing the convergence of classical and folk arts.
Programme Coordination
Dr Vivekananda Sajjan, Assistant Professor of Kannada and the programme's coordinator, delivered the introductory speech detailing the significance of Kannada Rajyotsava and the history of Kannada literature. The event was graced by founding member Mrs Shaila G. Chebbi, Registrar of Examination and Evaluation Dr K A Venkatesh, Director of the Dept. of Student Support Services Mr Mathew T, coordinators Dr Mithun Hanumesh and Prof Asha Rani N.R., heads of various departments, faculty members, staff, and university students.
The dignitaries presented awards to the winners of the various competitions held as part of Kannada Rajyotsava. Students Shama and Yashas anchored the event. Prof Kasaniya Naik delivered the vote of thanks. The programme captivated the audience with its diverse literary discussions and cultural activities.
Conclusion
The programme concluded with diverse literary discussions and cultural activities that captivated the audience and highlighted the spirit of Kannada Rajyotsava.
ಶೀರ್ಷಿಕೆ: ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾ ಕೇಂದ್ರ, ಭಾಷೆ ಮತ್ತು ಸಾಹಿತ್ಯ ವಿಭಾಗ, ಕನ್ನಡ ಸಂಘ ಮತ್ತು ವಿದ್ಯಾರ್ಥಿ ಬೆಂಬಲ ಸೇವಾ ವಿಭಾಗಗಳ ಸಹಯೋಗದೊಂದಿಗೆ 69ನೇ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಅಂಗವಾಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಗಾಗಿ ಅವರಲ್ಲಿರುವ ಸುಪ್ತವಾದ ಪ್ರತಿಭೆಗೆ ಉತ್ತೇಜನ ನೀಡಲು ಅಕ್ಟೋಬರ್29,2024ರಿಂದ ನವೆಂಬರ್ 06, 2024ರವರೆಗೆ ಆಶುಭಾಷಣ, ಭಾಷಣ, ಏಕಪಾತ್ರಾಭಿನಯ, ಏಕವ್ಯಕ್ತಿ ನೃತ್ಯ, ಸಮೂಹ ನೃತ್ಯ ಏಕವ್ಯಕ್ತಿ ಗಾಯನ,ಸಮೂಹ ಗಾಯನ, ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ವೇಷಭೂಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಸಮಾರಂಭವನ್ನು ದಿನಾಂಕ ನವೆಂಬರ್ 05, 2024 ರಂದು ಬೆಳಿಗ್ಗೆ 9.00 ಗಂಟೆಗೆ ಬಾಸ್ಕೆಟ್ ಬಾಲ್ ಅಂಕಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪ್ರೀಸ್ಟ್ಲೀ ಬಿ.ಶಾನ್ರವರು ಕನ್ನಡಾಂಬೆ ಭುವನೇಶ್ವರಿಗೆ ಪುಷ್ಪನಮನವನ್ನು ಸಲ್ಲಿಸಿ ನೆರವೇರಿಸಿದರು. ಈ ಸಂದರ್ಭದಲ್ಲಿ ಕನ್ನಡ ನಾಡಗೀತೆ ಯನ್ನು ಪ್ರಸ್ತುತ ಪಡಿಸಲಾಯಿತು.
ನವೆಂಬರ್ 08ರಂದು ಕನ್ನಡ ರಾಜ್ಯೋತ್ಸವ ಮುಖ್ಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಾಹಿತಿಗಳು ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆಯಾದ ಡಾ. ಬಿ.ಟಿ ಲಲಿತಾನಾಯಕ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಾತೃಭಾಷೆಯ ಮೂಲಕ ನಾವು ನಮ್ಮ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದಿನ ಆಧುನಿಕ ಸಮಾಜದಲ್ಲಿ ನಾವೆಷ್ಟೇ ಮುಂದುವರೆದರೂ ಲಿಂಗ ಸಮಾನತೆಯನ್ನು ಕಾರ್ಯಗತಗೊಳಿಸಲು ಸಾಕಷ್ಟು ಶ್ರಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮನುಷ್ಯ ಬದುಕಿರುವಷ್ಟು ದಿನ ಮಾನವೀಯತೆಯನ್ನು ಉಳಿಸಿಕೊಂಡು ಹೋಗಬೇಕು ಎಂದು ಅಭಿಪ್ರಾಯಪಟ್ಟರಲ್ಲದೆ ನಮ್ಮ ನಾಡಿನಲ್ಲಿರುವ ವೈವಿಧ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ನಾಡು ಕಲೆಗೆ ಹೆಸರುವಾಸಿಯಾಗಿದ್ದು, ಪ್ರತಿ ಕಲೆಯೂ ನಮ್ಮ ಬದುಕನ್ನು ಪ್ರತಿನಿಧಿಸುತ್ತದೆ ಎಂದರು.
ಅಲಯನ್ಸ್ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಂ.ವಿಶ್ವನಾಥಯ್ಯ ಅವರು ಮಾತನಾಡಿ ಕನ್ನಡ ನಾಡು ಶ್ರೇಷ್ಠ ಪರಂಪರೆಯನ್ನು ಹೊಂದಿದ್ದು, ಕುವೆಂಪುರವರಿಂದ ಕಂಬಾರರವರೆಗೆ 8 ಜ್ಞಾನಪೀಠ ಪ್ರಶಸ್ತಿಗಳಿಗೆ ಕನ್ನಡ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಶ್ರೀನಿಧಿ ಹೊಳ್ಳ ಅವರ ನೇತೃತ್ವದ ಉಡುಪಿಯ ಯಕ್ಷಶ್ರೀ ಕಲಾ ವೃಂದದ ಯಕ್ಷಗಾನ ಪ್ರದರ್ಶನ ಹಾಗೂ ಡೊಳ್ಳು ಚಂದ್ರು ಹಾಗೂ ಕಲಾ ತಂಡದ ವತಿಯಿಂದ ಡೊಳ್ಳು ಕುಣಿತ ಪ್ರದರ್ಶನದಿಂದ ಶಾಸ್ತ್ರೀಯ ಹಾಗೂ ಜಾನಪದ ಕಲೆಗಳ ಸಮಾಗಮಕ್ಕೆ ಕನ್ನಡ ರಾಜ್ಯೋತ್ಸವ ಸಮಾರಂಭ ಸಾಕ್ಷಿಯಾಯಿತು.
ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ವಿವೇಕಾನಂದ ಸಜ್ಜನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಹಾಗೂ ಕನ್ನಡ ಸಾಹಿತ್ಯ ನಡೆದು ಬಂದ ದಾರಿಯ ಕುರಿತು ವಿವರಿಸಿದರು. ಸಂಸ್ಥಾಪಕ ಸದಸ್ಯರಾದ ಶ್ರೀಮತಿ ಶೈಲಾ ಜಿ ಚೆಬ್ಬಿ, ಪರೀಕ್ಷೆ ಹಾಗೂ ಮೌಲ್ಯಮಾಪನ ಕುಲಸಚಿವರಾದ ಡಾ. ಕೆ. ಎ ವೆಂಕಟೇಶ್, ಸಂಯೋಜಕರಾದ ಡಾ. ಮಿಥುನ್ ಹನುಮೇಶ್, ಪ್ರೊ. ಆಶಾರಾಣಿ ಎನ್. ಆರ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು. ವಿದ್ಯಾರ್ಥಿಗಳಾದ ಶ್ರೀ ಶಮಾ ಹಾಗೂ ಯಶಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರೊ.ಕಸನಿಯಾ ನಾಯಕ್ ವಂದಿಸಿದರು. ವೈವಿಧ್ಯಮಯ ಸಾಹಿತ್ಯಿಕ ಚರ್ಚೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಕೂಡಿದ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು.