Media
ಅಲಯನ್ಸ್ ವಿಶ್ವವಿದ್ಯಾಲಯ, ಕನ್ನಡ ಭಾಷಾ ಕೇಂದ್ರದ ವತಿಯಿಂದ ೬೫ ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ದಿನಾಂಕ ೫-೧೧ -೨೦೨೦ ರಂದು ಸರಳ ರೀತಿಯಲ್ಲಿ ಆಚರಿಸಲಾಯಿತು. ಶ್ರೀಯುತ ಚಂದ್ರಶೇಖರ್ ರವರ ಪ್ರಾರ್ಥನೆ ಹಾಗೂ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. ಕನ್ನಡ ಭಾಷಾ ಕೇಂದ್ರದ ಉಪಾಧ್ಯಕ್ಷರು ಹಾಗೂ ಉಪನ್ಯಾಸಕರಾದ ಶ್ರೀಯುತ ರಮಣಶೆಟ್ಟಿಯವರು ಸ್ವಾಗತ ಕೋರಿದರು. ತದನಂತರ ಅಲಯನ್ಸ್ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಕನ್ನಡ ಭಾಷಾ ಕೇಂದ್ರದ ಅಧ್ಯಕ್ಷರಿಂದ ಕರ್ನಾಟಕ ಧ್ವಜಾರೋಹಣ ಹಾಗೂ ಕನ್ನಡಾಂಬೆಗೆ ಪುಷ್ಪನಮನವನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕನ್ನಡ ಭಾಷಾ ಕೇಂದ್ರದ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಶ್ರೀಯುತ ಪ್ರೇಮಾನಂದಶೆಟ್ಟಿಯವರು ಕನ್ನಡ ನಾಡು-ನುಡಿ, ಭಾಷೆಯ ಬಳಕೆ ಹಾಗೂ ಕರ್ನಾಟಕ ಸಂಸ್ಕೃತಿಯ ಬಗ್ಗೆ ಕೆಲವು ನಲ್ನುಡಿಗಳನ್ನಾಡಿದರು.
ಶ್ರೀಯುತ ರತ್ನಾಕರ ಆಚಾರಿಯವರು ವಂದನಾರ್ಪಣೆಯನ್ನು ಹಾಗೂ ಕನ್ನಡ ಭಾಷಾ ಕೇಂದ್ರದ ಕಾರ್ಯದರ್ಶಿ, ಶ್ರೀಯುತ ಪ್ರಕಾಶ್ ಐ ಎನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು, ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿ ವರ್ಗದವರು ಕನ್ನಡ ಭಾಷಾ ಕೇಂದ್ರದ ಎಲ್ಲಾ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲಾಯಿತು.