अनुकर्ष | ಅನುಕರ್ಷ್‌ | ANUKARSH

- ತಜ್ಞ ಪರಿಶೀಲಿತ ತ್ರೈಮಾಸಿಕ ಪತ್ರಿಕೆ -

ISSN No.: 2583-2948

ಭಾಷೆ ಹಾಗೂ ಸಾಹಿತ್ಯ ವಿಭಾಗದಿಂದ ಪ್ರಕಟಿತ

ಸಂಪಾದಕೀಯ ಮಂಡಳಿ

  • ಮಹಾ ಪೋಷಕರು
  • ಶ್ರೀ ಅಭಯ ಜಿ. ಚೆಬ್ಬಿ
    ಸಹ ಕುಲಾಧಿಪತಿಗಳು
    ಅಲಯನ್ಸ್‌ ವಿಶ್ವವಿದ್ಯಾಲಯ
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ,
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ - +91 80 4619 9100
    ಇ ಮೇಲ್‌ – abhay.chebbi@alliance.edu.in
  • ಪ್ರಧಾನ ಸಂಪಾದಕರು
  • ಡಾ. ಅನಿರುದ್ಧ ಶ್ರೀಧರ
    ಮುಖ್ಯಸ್ಥರು, ಭಾಷೆ ಹಾಗೂ ಸಾಹಿತ್ಯ ವಿಭಾಗ
    ಅಲಯನ್ಸ್‌ ವಿಶ್ವವಿದ್ಯಾಲಯ,
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ,
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ : +91 80 4619 9117
    ಇ ಮೇಲ್‌ – anirudh.sridhar@alliance.edu.in

ಸಂಪಾದಕರು

  • ಡಾ. ಅನುಪಮಾ ತಿವಾರಿ
    ಹಿಂದಿ ಸಹಾಯಕ ಪ್ರಾಧ್ಯಾಪಕರು
    ಭಾಷೆ ಹಾಗೂ ಸಾಹಿತ್ಯ ವಿಭಾಗ
    ಅಲಯನ್ಸ್‌ ವಿಶ್ವವಿದ್ಯಾಲಯ
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ,
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ : +91 80 4619 9121
    ಇ ಮೇಲ್‌ : anupama.tiwari@alliance.edu.in
  • ಡಾ. ವಿವೇಕಾನಂದ ಸಜ್ಜನ
    ಕನ್ನಡ ಸಹಾಯಕ ಪ್ರಾಧ್ಯಾಪಕರು ಭಾಷೆ ಹಾಗೂ ಸಾಹಿತ್ಯ ವಿಭಾಗ
    ಅಲಯನ್ಸ್‌ ವಿಶ್ವವಿದ್ಯಾಲಯ
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ : +91 80 4619 9122
    ಇ ಮೇಲ್‌: vivekanand.sajjan@alliance.edu.in

ಸಲಹಾ ಸಮಿತಿ

  • ಪ್ರೊ. ಗಜೇಂದ್ರ ಕುಮಾರ ಪಾಠಕ
    ಮುಖ್ಯಸ್ಥರು, ಹಿಂದಿ ವಿಭಾಗ
    ಹೈದರಾಬಾದ ವಿಶ್ವವಿದ್ಯಾಲಯ
    ಹೈದರಾಬಾದ, ತೆಲಂಗಾಣಾ
    ಮೊಬೈಲ್ : +91 83747 01410
    ಇ ಮೇಲ್ : gkpsh@uohyd.ac.in
  • ಡಾ. ಪ್ರಭಾ ಶಂಕರ ಪ್ರೇಮಿ
    ನಿವೃತ್ತ ಹಿಂದಿ ಪ್ರಾಧ್ಯಾಪಕರು
    ಬೆಂಗಳೂರು ವಿಶ್ವವಿದ್ಯಾಲಯ
    ಬೆಂಗಳೂರು – 560 056
    ದೂರವಾಣಿ- 22961651(Dept.)
    ಮೊಬೈಲ್ : 9880781278
    ಇ ಮೇಲ್‌ : tgprabhashankar@yahoo.com
  • ಡಾ. ಆಂಟೋನಿ ಆಲಿವರ್‌
    ಮುಖ್ಯಸ್ಥರು, ಹಿಂದಿ ವಿಭಾಗ
    ಸಂತ ಜೋಸೆಫರ ವಾಣಿಜ್ಯ ಮಹಾವಿದ್ಯಾಲಯ
    ಬೆಂಗಳೂರು, ಕರ್ನಾಟಕ
    ಮೊಬೈಲ್ : +91 ‌81971 66038
    ಇ ಮೇಲ್‌ : antonyoliver.oliver840@gmail.com
  • ಡಾ. ಪಾರ್ವತಿ ದಾಸ್‌
    ಆಂಗ್ಲ ಸಹಾಯಕ ಪ್ರಾಧ್ಯಾಪಕರು
    ಭಾರತೀಯ ಮಾಹಿತಿ ತಂತ್ರಜ್ಞಾನ, ವಿನ್ಯಾಸ ಮತ್ತು ತಯಾರಿಕಾ ಸಂಸ್ಥೆ
    ಕಾಂಚೀಪುರಂ
    ಇಮೇಲ್‌ : parvathydas@iiitdm.ac.in
  • ಡಾ.ಟಿ.ಡಿ ರಾಜಣ್ಣ
    ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ
    ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
    ಕಡಗಂಚಿ, ಕಲಬುರಗಿ- -585367
    ದೂರವಾಣಿ : +91 89044 46344
    ಇ ಮೇಲ್‌ : tdrajannathaggi@cuk.ac.in
  • ಡಾ. ಎಂ. ಎಸ್. ದುರ್ಗಾ ಪ್ರವೀಣ
    ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ
    ದ್ರಾವಿಡ ವಿಶ್ವವಿದ್ಯಾಲಯ, ಶ್ರೀನಿವಾಸವನಂ, ಕುಪ್ಪಂ
    ಆಂಧ್ರ ಪ್ರದೇಶ 517 426
    ಮೊಬೈಲ್‌ : +91 94419 97639
    ಇ ಮೇಲ್‌ : durgapraveenms@gmail.com
  • ಪ್ರೊ. ಬಿಬಿನ್‌ ಥಾಮಸ್‌
    ಸಹಾಯಕ ಪ್ರಾಧ್ಯಾಪಕರು
    ಆಂಗ್ಲವಿಭಾಗ, ಕ್ರೈಸ್ಟ್‌ ಮಹಾವಿದ್ಯಾಲಯ (ಸ್ವಾಯತ್ತ)
    ಇರಿಂಜಲಕ್ಕುಡಾ, ಕೇರಳ
    ದೂರವಾಣಿ : +91 94973 21285
    ಇ ಮೇಲ್‌ : bibint@christcollegeijk.edu.in

ಸಹಾಯಕ ಸಂಪಾದಕರು

  • ಡಾ. ಅರಿಂದಮ್‌ ದಾಸ್‌
    ಆಂಗ್ಲ ಸಹ ಪ್ರಾಧ್ಯಾಪಕರು
    ಭಾಷೆ ಹಾಗೂ ಸಾಹಿತ್ಯ ವಿಭಾಗ
    ಅಲಯನ್ಸ್‌ ವಿಶ್ವವಿದ್ಯಾಲಯ
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ : +91 80 4619 9248
    ಇ ಮೇಲ್‌ : arindam.das@alliance.edu.in
  • ಡಾ. ರವೂಫ್‌ ಮಿರ್‌
    ಸಹಾಯಕ ಪ್ರಾಧ್ಯಾಪಕರು
    ಮಾಧ್ಯಮ ಮತ್ತು ಪತ್ರಿಕೋದ್ಯಮ
    ಅಲಯನ್ಸ್‌ ವಿಶ್ವವಿದ್ಯಾಲಯ
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ : +91 80 4619 9349
    ಇ ಮೇಲ್ : raoof.mir@alliance.edu.in
  • ಪ್ರೊ. ರವಿ ಚಕ್ರವರ್ತಿ
    ಆಂಗ್ಲ ಸಹಾಯಕ ಪ್ರಾಧ್ಯಾಪಕರು
    ಭಾಷೆ ಹಾಗೂ ಸಾಹಿತ್ಯ ವಿಭಾಗ
    ಅಲಯನ್ಸ್‌ ವಿಶ್ವವಿದ್ಯಾಲಯ
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ : +91 80 4619 9134
    ಇ ಮೇಲ್‌ : ravi.chakraborty@alliance.edu.in
  • ಡಾ. ಪ್ರಕಾಶ ಐ. ಎನ್‌
    ಗ್ರಂಥಪಾಲಕರು
    ಅಲಯನ್ಸ್‌ ವಿಶ್ವವಿದ್ಯಾಲಯ
    ಚಂದಾಪುರ - ಆನೇಕಲ್‌ ಮುಖ್ಯ ರಸ್ತೆ
    ಆನೇಕಲ್‌, ಬೆಂಗಳೂರು - 562 106
    ದೂರವಾಣಿ : +91 80 4619 9084
    ಇ ಮೇಲ್‌ : librarian@alliance.edu.in

ಅನುಕರ್ಷ್ ಪತ್ರಿಕೆಯ ಕುರಿತು

ಅಲಯನ್ಸ್‌ ವಿಶ್ವವಿದ್ಯಾಲಯದ ಭಾಷೆ ಹಾಗೂ ಸಾಹಿತ್ಯ ವಿಭಾಗದಿಂದ ಪ್ರಕಟವಾಗುವ ಅನುಕರ್ಷ್‌ ಪತ್ರಿಕೆಯು ಒಂದು ತಜ್ಞ ಪರಿಶೀಲಿತ ಪತ್ರಿಕೆಯಾಗಿದೆ. ಈ ಪತ್ರಿಕೆಯ ವಿಶೇಷತೆ ಎಂದರೆ ಇದರಲ್ಲಿ ಇಂಗ್ಲೀಷ, ಹಿಂದಿ, ಕನ್ನಡ ಹಾಗೂ ಇತರೆ ಭಾರತೀಯ ಭಾಷೆಗಳು ಸೇರಿದಂತೆ ಮೂರಕ್ಕಿಂತ ಹೆಚ್ಚು ಭಾಷೆಗಳಿಂದ ಲೇಖನಗಳನ್ನು ಸಂಗ್ರಹಿಸಲಾಗುತ್ತದೆ.

ಸಂಶೋಧನಾತ್ಮಕ ಹಾಗೂ ವಿಮರ್ಶಾತ್ಮಕ ಬರಹಗಳ ಮೂಲಕ ಭಾರತೀಯ ಭಾಷೆಗಳಲ್ಲಿನ ಸಮೃದ್ಧ ವಿಚಾರಧಾರೆಗಳನ್ನು ಚರ್ಚೆಗೆ ಒಳಪಡಿಸುವುದು, ಹಾಗೆಯೇ ವಿವಿಧ ಭಾಷೆಗಳಿಂದ ಸ್ವೀಕರಿಸಿದ ಲೇಖನಗಳ ಮೂಲಕ ಆಯಾ ಭಾಷೆಗಳಲ್ಲಿ ಚರ್ಚಿತವಾದ ವಿಷಯಗಳನ್ನು ತೌಲನಿಕ ವಿವೇಚನೆಯ ಮೂಲಕ ಅನುಸಂಧಾನ ಮಾಡುವುದು ಪತ್ರಿಕೆಯ ಉದ್ದೇಶವಾಗಿದೆ. ಇದು ಪ್ರಸ್ತುತ ಸನ್ನಿವೇಶದಲ್ಲಿ ಬಹು ಆಯಾಮಗಳಲ್ಲಿ ವಿಸ್ತೃತವಾಗುತ್ತ ಸಾಗಿರುವ ತೌಲನಿಕ ಅಧ್ಯಯನ ವಿಧಾನವನ್ನು ಬೆಳೆಸಲು ಸಹಾಯ ಮಾಡುತ್ತದೆ. ದಕ್ಷಿಣ ಭಾರತದಿಂದ ಮೊದಲ ಬಾರಿಗೆ ಮೂರು ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಈ ಪತ್ರಿಕೆಯು ಭಾರತೀಯ ಭಾಷೆಗಳ ಪರಸ್ಪರ ತಿಳುವಳಿಕೆಗೆ ಖಂಡಿತವಾಗಿಯೂ ಸಹಕಾರಿಯಾಗಬಲ್ಲದು.

JGATE INDEXED

About the Anukarsh Magazine

“ಅನುಕರ್ಷ್‌” ಪತ್ರಿಕೆಗಾಗಿ ಬರಹಗಳ ಆಹ್ವಾನ, ಸಂಪುಟ -04, ಸಂಚಿಕೆ - 03

ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಭಾಷೆ ಮತ್ತು ಸಾಹಿತ್ಯ ವಿಭಾಗದಿಂದ ಪ್ರಕಟವಾಗುವ ಅನುಕರ್ಷ್‌: ತಜ್ಞ- ಪರಿಶೀಲಿತ ತ್ರೈಮಾಸಿಕ ಪತ್ರಿಕೆಯು (ISSN: 2583-2948) ೨೦೨೧ನೇ ಸಾಲಿನಲ್ಲಿ ಆರಂಭವಾಗಿ ತನ್ನ ಪ್ರಕಟಣೆಯ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ದೇಶದ ವಿವಿಧ ಭಾಗಗಳ ಸೃಜನಶೀಲ ಬರಹಗಾರರು, ಸಂಶೋಧಕರು, ಲೇಖಕರು ಹಾಗೂ ವಿಮರ್ಶಕರ ಸಹಯೋಗದಿಂದ ಪತ್ರಿಕೆಯು ವೈವಿಧ್ಯಮಯ ವಿಷಯಗಳೊಂದಿಗೆ ಬಹುಭಾಷಿಕವಾಗಿ ಪ್ರಕಟವಾಗುತ್ತ ಬರುತ್ತಿದೆ.

ಅನುಕರ್ಷ್‌ ಪತ್ರಿಕೆಯ ವತಿಯಿಂದ ಈ ಸಂಚಿಕೆಗಾಗಿ ಬರಹಗಾರರಿಂದ ಸಾಹಿತ್ಯದ ಯಾವುದೇ ಪ್ರಕಾರಕ್ಕೆ ಸೇರಿದ ಮೌಲಿಕವಾದ ಸೃಜನಾತ್ಮಕ ಹಾಗೂ ವಿಮರ್ಶಾತ್ಮಕ ಬರಹಗಳನ್ನು ಪತ್ರಿಕೆಯಲ್ಲಿ ಪ್ರಕಟಣೆಗಾಗಿ ಆಹ್ವಾನಿಸಲಾಗಿದೆ. ಕಲೆ, ಸಾಹಿತ್ಯ, ಸಮಾಜ ವಿಜ್ಞಾನ ಹಾಗೂ ಸಂಸ್ಕೃತಿಗಳ ಜೊತೆಗೆ ವೈಜ್ಞಾನಿಕ ಲೇಖನಗಳನ್ನು ಸಹ ಲೇಖಕರು ಕಳುಹಿಸಬಹುದಾಗಿದೆ.

ಎಂದಿನಂತೆ ಪ್ರಸ್ತುತ ಸಂಚಿಕೆಯನ್ನು ಸಹ ಕನ್ನಡ, ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಗಳ ಬರಹಗಳನ್ನೊಳಗೊಂಡು ಪ್ರಕಟಿಸುವ ಉದ್ದೇಶವನ್ನು ಹೊಂದಿದ್ದೇವೆ. ಆದಾಗ್ಯೂ ಇತರೆ ಭಾರತೀಯ ಭಾಷೆಗಳಿಂದಲೂ ನಾವು ಬರಹಗಳನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಬಹುಭಾಷಿಕ ಹಾಗೂ ಅಂತರಶಿಸ್ತೀಯ ವೇದಿಕೆಯಾಗಿ ಅನುಕರ್ಷ್ ಪತ್ರಿಕೆಯು ವೈವಿಧ್ಯಮಯ ಭಾಷಿಕ, ಸಾಂಸ್ಕೃತಿಕ, ವೈಚಾರಿಕ ಹಿನ್ನೆಲೆಯ ವಿದ್ವಾಂಸರು, ಬರಹಗಾರರು ಮತ್ತು ಸಾಹಿತಿಗಳನ್ನು ಒಟ್ಟುಗೂಡಿಸುವ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ಭಾವಿಸಿದ್ದೇವೆ.

ಪ್ರಸ್ತುತ ಸಂಚಿಕೆಗಾಗಿ ದೇಶದ ಗೌರವಾನ್ವಿತ ಬರಹಗಾರರು, ವಿದ್ವಾಂಸರು ಹಾಗೂ ಸಂಶೋಧಕರು ಲೇಖನ, ಪುಸ್ತಕ ವಿಮರ್ಶೆ, ಕಥೆ, ಕವಿತೆ ಸೇರಿದಂತೆ ಯಾವುದೇ ಪ್ರಕಾರದ ಅಪ್ರಕಟಿತ ಹಾಗೂ ಎಲ್ಲಿಯೂ ಪ್ರಕಟಣೆಗೆ ಸಲ್ಲಿಸದ ಬರಹಗಳನ್ನು anukarsh@alliance.edu.in ಇ-ಮೇಲ್‌ ವಿಳಾಸಕ್ಕೆ ಸೆಪ್ಟೆಂಬರ್‌ ೧೭, ೨೦೨೪ರೊಳಗಾಗಿ ಕಳುಹಿಸಿಕೊಡಬೇಕೆಂದು ನಾವು ಕೋರುತ್ತೇವೆ. ಕನ್ನಡದಲ್ಲಿ ತಮ್ಮ ಬರಹಗಳನ್ನು ಕಳುಹಿಸಲಿಚ್ಛಿಸುವವರು ಯುನಿಕೋಡ್‌ ಅಥವಾ ನುಡಿ ೧೩ ಫಾಂಟ್‌ ನಲ್ಲಿ ಬೆರಳಚ್ಚು ಮಾಡಿ ನುಡಿ ಹಾಗೂ ಪಿಡಿ ಎಫ್‌ ಎರಡೂ ನಮೂನೆಗಳಲ್ಲಿ ಕಳುಹಿಸಿಕೊಡಬೇಕಾಗಿ ವಿನಂತಿ. ತಮ್ಮ ಬರಹಗಳನ್ನು ಸಲ್ಲಿಸಲಿಚ್ಛಿಸುವ ಬರಹಗಾರರು ತಮ್ಮ ಬರಹದ ಜೊತೆಗೆ ಅ) ಹೆಸರು, ಆ) ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ/ವಿಳಾಸ, ಇ) ಇಮೇಲ್‌ ವಿವರವನ್ನು ನಮೂದಿಸಿರಬೇಕು ಈ) ಲೇಖನ ಸ್ವೀಕೃತವಾದ ನಂತರ ಸಂಪಾದಕ ಮಂಡಳಿಯು ನೀಡುವ ನಮೂನೆಯಲ್ಲಿ ಘೋಷಣಾ ಪತ್ರವನ್ನು ಸಲ್ಲಿಸಬೇಕು.

ಲೇಖನಗಳು ಅಥವಾ ಸಂಶೋಧನಾತ್ಮಕ ಬರಹಗಳನ್ನು ಸಲ್ಲಿಸಲು ಇರುವ ನಿಯಮಾವಳಿಗಳು

೧.
ಅನುಕರ್ಷ್ ಪತ್ರಿಕೆಯಲ್ಲಿ ಪ್ರಕಟಣೆಗಾಗಿ ಕಳುಹಿಸುವ ಕನ್ನಡ ಸಂಶೋಧನಾ ಅಥವಾ ವಿಮರ್ಶಾತ್ಮಕ ಲೇಖನವು ಯುನಿಕೋಡ್‌ ಅಥವಾ ನುಡಿ ಫಾಂಟ್‌ ಗಾತ್ರ ೧೪ ಇದ್ದು, ೧೫೦೦ ಪದಗಳ ವ್ಯಾಪ್ತಿಯನ್ನು ಮೀರದಂತೆ ಇರಬೇಕು. ಕನ್ನಡ ಭಾಷೆಯ ಪುಸ್ತಕದ ಕುರಿತ ವಿಮರ್ಶೆಯನ್ನೊಳಗೊಂಡ ಲೇಖನದಲ್ಲಿ ಕನಿಷ್ಠ ಎರಡು ಪುಸ್ತಕಗಳ ವಿಮರ್ಶೆಯು ಅಪೇಕ್ಷಿತವಾಗಿದೆ. ಪುಸ್ತಕ ವಿಮರ್ಶಾ ಲೇಖನಗಳಲ್ಲಿ ವಿಮರ್ಶೆಯ ಮಾದರಿಯನ್ನು ರಚನಾತ್ಮಕವಾಗಿ ಅನುಸರಿಸಿದ ಲೇಖನಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಪುಸ್ತಕ ವಿಮರ್ಶಾ ಲೇಖನವು ೮೦೦ ಪದಗಳನ್ನು ಮೀರಿರಬಾರದು.
೨.
ಲೇಖಕರು ಪೂರ್ಣ ಲೇಖನವನ್ನು ಕಳುಹಿಸುವ ಮೊದಲು ೧೫೦-೨೦೦ ಪದಗಳಲ್ಲಿ ತಮ್ಮ ಲೇಖನದ ಸಾರಾಂಶವನ್ನು ಕಳುಹಿಸಬೇಕು.
೩.
ಲೇಖನದ ಕೊನೆಯಲ್ಲಿ ಲೇಖಕರ ಹೆಸರು, ಮೊಬೈಲ್‌ ಸಂಖ್ಯೆ, ಇಮೇಲ್ ವಿಳಾಸ ಮತ್ತು ಅವರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಅಥವಾ ಮನೆಯ ವಿಳಾಸ ಇರಬೇಕು.
೪.
ಪತ್ರಿಕೆಗೆ ಕಳುಹಿಸುವ ಯಾವುದೇ ಲೇಖನವು ಮೂಲ ಸ್ವರೂಪದ್ದಾಗಿರಬೇಕು ಮತ್ತು ಅಪ್ರಕಟಿತವಾಗಿರಬೇಕು. ಲೇಖನದ ಜೊತೆಗೆ ಸಹಿಯೊಂದಿಗೆ ಅದು ಮೂಲ ಮತ್ತು ಅಪ್ರಕಟಿತವಾಗಿರುವುದರ ಕುರಿತು ಘೋಷಣೆಯನ್ನು ಕಳುಹಿಸುವುದು ಕಡ್ಡಾಯವಾಗಿದೆ.
೫.
ಲೇಖನಗಳನ್ನು ಕಳುಹಿಸುವಾಗ, ಕಾಗುಣಿತ ದೋಷಗಳ ಪರಿಶೀಲನೆಗೆ ವಿಶೇಷ ಕಾಳಜಿ ವಹಿಸಿ. ಮುದ್ರಣ ದೋಷಗಳು, ಅಕ್ಷರ ದೋಷಗಳು, ವ್ಯಾಕರಣ ದೋಷಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಲೇಖನವನ್ನು ಕಳುಹಿಸಲು ಕೋರಲಾಗಿದೆ.
೬.
ವಿಷಯ ತಜ್ಞರ ಒಪ್ಪಿಗೆಯ ನಂತರವೇ ಸಂಶೋಧನಾ ಲೇಖನಗಳನ್ನು ಪ್ರಕಟಿಸಲಾಗುವುದು. ಸಂಶೋಧನಾ ಲೇಖನಗಳನ್ನು ಬರೆಯುವಾಗ ಉಲ್ಲೇಖಗಳನ್ನು ಹಾಗೂ ಆಕರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಉದಾಹರಣೆಗೆ ಲೇಖಕರ ಹೆಸರು, ಪುಸ್ತಕದ ಹೆಸರು, ಪುಟ ಸಂಖ್ಯೆ ಇತ್ಯಾದಿ. ಪತ್ರಿಕೆಯ ಸಂದರ್ಭದಲ್ಲಿ - ಪ್ರಕಟಣೆಯ ವರ್ಷ, ಆವೃತ್ತಿ, ಪುಟ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
೭.
ಓದುಗರ ಸಲಹೆ- ಸೂಚನೆಗಳಿಗೆ ಮುಕ್ತ ಸ್ವಾಗತವಿದೆ. ಪತ್ರಿಕೆಯನ್ನು ಓದಿದ ನಂತರ, ದಯವಿಟ್ಟು ನಿಮ್ಮ ಲಿಖಿತ ಪ್ರತಿಕ್ರಿಯೆಗಳು ಅಥವಾ ಸಲಹೆಗಳನ್ನು ನಮಗೆ ಕಳುಹಿಸಿ. ಇದರಿಂದ ಮುಂಬರುವ ಸಂಚಿಕೆಯಲ್ಲಿ ಅಗತ್ಯ ಪರಿಷ್ಕರಣೆಗಳನ್ನು ಮಾಡಲು ನಮಗೆ ಸಹಕಾರಿಯಾಗುತ್ತದೆ.

ಸುದ್ದಿ ಮತ್ತು ಕಾರ್ಯಕ್ರಮಗಳು

ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಹಿಂದಿ ದಿವಸ್ ಆಚರಣೆಗಳು
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಹಿಂದಿ ದಿವಸ್ ಆಚರಣೆ
ಸೆಪ್ಟೆಂಬರ್ ೨೪, ೨೦೨೧
ಈಗ ಓದಿ
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗಳು
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ನವೆಂಬರ್ ೧೩, ೨೦೨೧
ಈಗ ಓದಿ

ಸಂಪರ್ಕ ವಿಳಾಸ

ಭಾಷೆ ಹಾಗೂ ಸಾಹಿತ್ಯ ವಿಭಾಗ, ಅಲಯನ್ಸ್‌ ವಿಶ್ವವಿದ್ಯಾಲಯ

ಚಿಕ್ಕ ಹಾಗಡೆ ಕ್ರಾಸ್‌, ಚಂದಾಪುರ-ಆನೇಕಲ್‌, ಮುಖ್ಯ ರಸ್ತೆ, ಆನೇಕಲ್‌, ಬೆಂಗಳೂರು , ೫೬೨ ೧೦೬– ಕರ್ನಾಟಕ, ಭಾರತ.

ಇ-ಮೇಲ್ : anukarsh@alliance.edu.in